ಕೇರಳ ಮುಖ್ಯಮಂತ್ರಿಗೆ ಗೌರವಪೂರ್ವಕ ಮನವಿ: ಧಾರ್ಮಿಕ ವಿಚಾರಗಳಲ್ಲಿ ಸಂಯಮದ ಭಾಷೆ ಬಳಕೆಗೆ ಆಗ್ರಹ






*ಮಾನ್ಯ ಕೇರಳ ಮುಖ್ಯಮಂತ್ರಿ ಅವರಿಗೆ ಒಂದು ಗೌರವಪೂರ್ವಕ ಮನವಿ✍️✍️*🌸🌺                           

*ಮಾನ್ಯ ಕೇರಳ ಮುಖ್ಯಮಂತ್ರಿಗಳೇ*

ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಗೌರವವನ್ನು ಕಾಪಾಡುವ ಜವಾಬ್ದಾರಿ ಹೊಂದಿರುವ ಉನ್ನತ ಸ್ಥಾನದಲ್ಲಿರುವ ನಾಯಕರು ಯಾವುದೇ ಧಾರ್ಮಿಕ ವಿಷಯದ ಕುರಿತು ಪ್ರತಿಕ್ರಿಯಿಸುವ ಸಂದರ್ಭದಲ್ಲಿ ಅತ್ಯಂತ ಎಚ್ಚರಿಕೆ ಮತ್ತು ಸಂಯಮವನ್ನು ಪಾಲಿಸುವುದು ಅಗತ್ಯವಾಗಿದೆ.


*🌹ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ (ಎ.ಪಿ. ಉಸ್ತಾದ್) ಅವರಂತಹ ಹಿರಿಯ ಧಾರ್ಮಿಕ ಪಂಡಿತರು*🌹                


👉ತಮ್ಮ ದೀರ್ಘಕಾಲದ ಜ್ಞಾನ,    ಅಧ್ಯಯನ ಮತ್ತು ಅನುಭವದ ಆಧಾರದ ಮೇಲೆ ಯಾವುದೇ ಧಾರ್ಮಿಕ ವಿಷಯದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದಾಗ, ಅದರ ಹಿನ್ನೆಲೆ, ಉದ್ದೇಶ ಮತ್ತು ನಿಜವಾದ ಅರ್ಥವನ್ನು ಸಂಪೂರ್ಣವಾಗಿ ಅರಿತುಕೊಂಡ ನಂತರವೇ ಪ್ರತಿಕ್ರಿಯಿಸುವುದು ಸೂಕ್ತವೆಂದು ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತೇವೆ.

ಅವರ ಹೇಳಿಕೆಯ ಒಂದು ಭಾಗವನ್ನು ಮಾತ್ರ ಆಧರಿಸಿ ಅಥವಾ ಸಂಪೂರ್ಣ ವಿಷಯವನ್ನು ತಿಳಿಯದೆ ತಕ್ಷಣದ ಪ್ರತಿಕ್ರಿಯೆ ನೀಡುವುದರಿಂದ ಅನಗತ್ಯ ಗೊಂದಲಗಳು ಮತ್ತು ಸಮಾಜದಲ್ಲಿ ತಪ್ಪು ಅರ್ಥೈಸುವಿಕೆಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ, ಇಂತಹ ಸೂಕ್ಷ್ಮ ವಿಷಯಗಳಲ್ಲಿ ಪ್ರತಿಕ್ರಿಯಿಸುವ ಮೊದಲು" ಸಾವಿರ ಬಾರಿ ಯೋಚಿಸಿ, ಸಂಪೂರ್ಣ ಸತ್ಯಾಂಶಗಳನ್ನು ತಿಳಿದುಕೊಂಡು ಮತ್ತು ವಿಷಯದ ಆಳವನ್ನು ಅರ್ಥಮಾಡಿಕೊಂಡು ಮಾತನಾಡುವುದು ಉತ್ತಮ.


ಹೇಳಿದ ಮಾತನ್ನು ನಂತರ ಹಿಂಪಡೆಯಬೇಕಾದ ಪರಿಸ್ಥಿತಿ ಬಂದರೆ ಅದು ಯಾವುದೇ ನಾಯಕನ ಗೌರವ ಮತ್ತು ವಿಶ್ವಾಸಾರ್ಹತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೆ ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಬೇಕಾಗಿದೆ—ಒಂದು ಹೇಳಿಕೆ ಅಥವಾ ಟೀಕೆಯಿಂದ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರಂತಹ ಹಿರಿಯ ಧಾರ್ಮಿಕ ಪಂಡಿತರ ಜ್ಞಾನ, ಮೌಲ್ಯ, ಗೌರವ ಮತ್ತು ಸಮಾಜದಲ್ಲಿ ಹೊಂದಿರುವ ಸ್ಥಾನಮಾನಕ್ಕೆ ಯಾವುದೇ ರೀತಿಯ ಕಡಿಮೆಯಾಗುವುದಿಲ್ಲ.

ಎ.ಪಿ. ಉಸ್ತಾದ್ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ವ್ಯಕ್ತಿತ್ವವಲ್ಲ; ಶಿಕ್ಷಣ, ಮಾನವೀಯತೆ, ಸಾಮಾಜಿಕ ಸೇವೆ ಮತ್ತು ಧಾರ್ಮಿಕ ಜ್ಞಾನ ಕ್ಷೇತ್ರ ಕ್ಷೇತ್ರಗಳಲ್ಲಿ ಅಪಾರ ಕೊಡಿಗೆ ನೀಡಿರುವ ಹಿರಿಯ ಧಾರ್ಮಿಕ ನಾಯಕರು. ಆದ್ದರಿಂದ ಅವರಂತಹ ಗೌರವಾನಿತ ವ್ಯಕ್ತಿಗಳ ಕುರಿತು ಮಾತನಾಡುವಾಗ..................                       


*ಗೌರವ ಸಂಯಮ ಮತ್ತು ಜವಾಬ್ದಾರಿಯುತ ಭಾಷೆಯನ್ನು ಬಳಸುವುದು ಪ್ರಜಾಪ್ರಭುತ್ವ ಮತ್ತು ಸಮಾಜದ ಹಿತದ ದೃಷ್ಟಿಯಿಂದ ಅತ್ಯಂತ ಅಗತ್ಯವಾಗಿದೆ*                                  

*ಮಾನ್ಯ ಕೇರಳ ಮುಖ್ಯಮಂತ್ರಿಗಳು*            ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ. ಯಾವುದೇ ಧಾರ್ಮಿಕ ವಿಚಾರದಲ್ಲಿ ಅನಗತ್ಯ ವಿವಾದಗಳಿಗೆ ಅವಕಾಶ ನೀಡದೆ. ಎಲ್ಲಾ ಸಮುದಾಯಗಳ ಭಾವನೆಗಳನ್ನು ಗೌರವಿಸಿ ಶಾಂತಿ ಮತ್ತು ಸೌಹಾರ್ದತೆಯನ್ನು ಮತ್ತಷ್ಟು ಬಲಪಡಿಸುವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ವಿನಮ್ರ ಮನವಿ ಮಾಡಿಕೊಳ್ಳುತ್ತೇವೆ...................                                            *🌸ಗೌರವ ಉಳಿದಾಗಲೇ ಸಂವಾದ ಸುಂದರವಾಗುತ್ತದೆ. ಸಂಯಮ ಉಳಿದಾಗಲೇ ಸಮಾಜದಲ್ಲಿ ಸೌಹಾರ್ದತೆಗೆ ಬಲವಾಗುತ್ತದೆ*    *ಸಮಾಜದಲ್ಲಿ ಭಿನ್ನಾಭಿಪ್ರಾಯಗಳಿಗಿಂತ ಪರಸ್ಪರ ತಿಳುವಳಿಕೆ ಹೆಚ್ಚಾಗಲಿ, ಚರ್ಚೆಗಳಿಗಿಂತ ಸೌಹಾರ್ದತೆ ಬಲವಾಗಲಿ, ಮತ್ತು ಗೌರವವನ್ನು ಕಾಪಾಡುವ ಸಂವಾದಗಳು ಬೆಳೆಯಲ್ಲಿ ಎಂಬುದು ನಮ್ಮ ಆಶಯ*


*ಇತೀ ಸೋಶಿಯಲ್ ಫಾರೂಕ್ ಸಾಮಾಜಿಕ ಕಾರ್ಯ ಕರ್ತರು✍️✍️*


*ಶಾನ್ ಮೀಡಿಯಾ ಸಂಪಾದಕಾರದ ಅಲಿಮೋನಾಕ  ಉಳ್ಳಾಲ*✍️✍️



Next Post Previous Post
No Comment
Add Comment
comment url




sr7themes.eu.org