LPG ಹೊಸ ಕನೆಕ್ಷನ್ / ಸಂಪರ್ಕ ನೀಡದೆ ಗ್ರಾಹಕರಿಗೆ ತೊಂದರೆ : ಕೇಂದ್ರ ಸರ್ಕಾರ ಮತ್ತು ಗ್ಯಾಸ್ ಏಜೆನ್ಸಿಗಳ ವಿರುದ್ಧ SDPI ಆಕ್ರೋಶ
ಮಂಗಳೂರು, ದಿ: 26.08.2026
ಕಳೆದ ಹಲವು ತಿಂಗಳುಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಬಡ ಮತ್ತು ಮಧ್ಯಮ ವರ್ಗದ ಜನರಿಗೆ _LPG ಹೊಸ ಗ್ಯಾಸ್ ಕನೆಕ್ಷನ್ ನೀಡದೇ_ ಗ್ಯಾಸ್ ಏಜೆನ್ಸಿಗಳು ಮತ್ತು ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ತೊಂದರೆ ನೀಡುತ್ತಿದೆ ಎಂದು SDPI ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿ ಆರೋಪಿಸಿದೆ.
ಹೊಸದಾಗಿ ಮದುವೆಯಾದ ಕುಟುಂಬಗಳು, ಬಾಡಿಗೆ ಮನೆಗೆ ಬಂದವರು, ಅವಿಭಕ್ತ ಕುಟುಂಬದಿಂದ ಬೇರೆಯಾದವರು ಹೊಸ ಕನೆಕ್ಷನ್‌ಗಾಗಿ ಅಲೆದಾಡುವಂತಾಗಿದೆ. ಏಜೆನ್ಸಿಗಳಿಗೆ ಹೋದರೆ "ಸರ್ವರ್ ಇಲ್ಲ, ಹೊಸ ಕಲೆಕ್ಷನ್ ಸದ್ಯಕ್ಕೆ ಇಲ್ಲ, ಕಂಪನಿಯಿಂದ ಸೂಚನೆ ಬಂದಿಲ್ಲ" ಎಂದು ಸಬೂಬು ಹೇಳಿ ವಾಪಸ್ ಕಳುಹಿಸಲಾಗುತ್ತಿದೆ.
ಇದರಿಂದ ಜನರು ಅನಿವಾರ್ಯವಾಗಿ ಕಪ್ಪು ಮಾರುಕಟ್ಟೆಯಲ್ಲಿ ಹೆಚ್ಚಿನ ಹಣ ಕೊಟ್ಟು ಸಿಲಿಂಡರ್ ಖರೀದಿಸಬೇಕಾಗಿದೆ. ಕೆಲವರು ಮತ್ತೆ ಸೌದೆ ಒಲೆಗೆ ಮೊರೆ ಹೋಗಿದ್ದಾರೆ. ಇದು ಕೇಂದ್ರ ಸರ್ಕಾರದ _ಉಜ್ವಲಾ ಯೋಜನೆಯ ವೈಫಲ್ಯ_ ವನ್ನು ಎತ್ತಿ ತೋರಿಸುತ್ತದೆ.
ಒಂದು ಕಡೆ ಗ್ಯಾಸ್ ಬೆಲೆಯನ್ನು 900 ರಿಂದ 1000 ರೂ.ಗೆ ಏರಿಸಿ ಜನರ ಜೇಬಿಗೆ ಕತ್ತರಿ ಹಾಕಿದ ಕೇಂದ್ರ ಸರ್ಕಾರ, ಇನ್ನೊಂದು ಕಡೆ ಹೊಸ ಕನೆಕ್ಷನ್ ಕೂಡ ನೀಡದೆ ಜನರನ್ನು ಸಂಕಷ್ಟಕ್ಕೆ ದೂಡಿದೆ.
ನಮ್ಮ ಆಗ್ರಹಗಳು
1. ತಕ್ಷಣ ಎಲ್ಲಾ ಗ್ಯಾಸ್ ಏಜೆನ್ಸಿಗಳು ಹೊಸ LPG ಕನೆಕ್ಷನ್ ನೀಡಲು ಆರಂಭಿಸಬೇಕು
2. ಕಪ್ಪು ಮಾರುಕಟ್ಟೆ ದಂಧೆಯನ್ನು ನಿಯಂತ್ರಿಸಬೇಕು
3. ಬಡ ಕುಟುಂಬಗಳಿಗೆ ಸಬ್ಸಿಡಿ ಸಹಿತ ಕಡಿಮೆ ದರದಲ್ಲಿ ಗ್ಯಾಸ್ ನೀಡಬೇಕು
ಹೊಸ ಕನೆಕ್ಷನ್ ನೀಡಲು ಆರಂಭಿಸದಿದ್ದರೆ SDPI ವತಿಯಿಂದ ಗ್ಯಾಸ್ ಏಜೆನ್ಸಿಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು SDPI ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಉಸ್ಮಾನ್ ಗುರುಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂತಿ,
ಉಸ್ಮಾನ್ ಗುರುಪುರ
ಅಧ್ಯಕ್ಷರು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ, SDPI
